145 ಎಸೆತ, ಅಜೇಯ 232 ರನ್ ಹೊಸ ವಿಶ್ವದಾಖಲೆ ಬರೆದ ನ್ಯೂಜಿಲೆಂಡ್​ ಆಟಗಾರ್ತಿ ಅಮೆಲಿಯಾ ಕೆರ್


Thursday, June 14th, 2018 11:04 am

ನ್ಯೂಸ್ ಡೆಸ್ಕ್: ನ್ಯೂಜಿಲೆಂಡ್​ನ ಮಹಿಳಾ ಆಟಗಾರ್ತಿ ಅಮೆಲಿಯಾ ಕೆರ್ ಅವರು ಕ್ರಿಕೆಟ್​ ಇತಿಹಾಸದ ಹೊಸ ದಾಖಲೆ ಬರೆದಿದ್ದಾರೆ. ಐರ್ಲೆಂಡ್​​ ವಿರುದ್ಧ ಡಬ್ಲಿನ್​ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಅಜೇಯ ದ್ವಿಶತಕ(232*) ರನ್ ಗಳಿಸಿದ್ದು ಈ ಮೂಲಕ ಹೊಸ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ. ಐರ್ಲೆಂಡ್​​ ವಿರುದ್ಧ ಡಬ್ಲಿನ್​ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಕೇವಲ 145 ಎಸೆತಗಳಲ್ಲಿ ಅಜೇಯ 232 ರನ್​ ಗಳಿಸುವ ಮೂಲಕ ವೈಯಕ್ತಿಕ ಗರಿಷ್ಠ ರನ್​ ದಾಖಲಿಸಿದ್ದಾರೆ.

134 ಎಸೆತಗಳಲ್ಲೇ ದ್ವಿಶತಕ ಸಾಧನೆ ಮಾಡಿದ ಕೆರ್​, ತಾವು ಗಳಿಸಿದ ಅಜೇಯ 232 ರನ್​ಗಳಲ್ಲಿ 31 ಬೌಂಡರಿ ಹಾಗೂ 2 ಸಿಕ್ಸರ್​  ಸಿಡಿಸಿದ್ದಾರೆ.

ಇನ್ನು  17 ವರ್ಷದ ಅಮೆಲಿಯಾ ಕೆರ್ ಅವರು 21ನೇ ವಯಸ್ಸಿನಲ್ಲಿ ಆಸ್ಟ್ರೇಲಿಯಾದ ಬೆಲಿಂದ್​ ಕ್ಲಾರ್ಕ್ ಮಾಡಿದ್ದ ದಾಖಲೆಯನ್ನು ಮುರಿದ್ದಾರೆ. ಬೆಲಿಂದ ಕ್ಲಾರ್ಕ್​ ಅವರು 1997ರಲ್ಲಿ ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ಡೆನ್ಮಾರ್ಕ್​ ವಿರುದ್ಧ 229 ರನ್​ ಗಳಿಸಿ ಮೊದಲ ದ್ವಿಶತಕ ಸಾಧನೆ ಮಾಡಿದ್ದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Health
Sandalwood
Food
Beauty Tips
Astrology
Cricket Score
Poll Questions