ಮೇಷ

ವಾದಗಳು ಮತ್ತು ಭಿನ್ನಾಭಿಪ್ರಾಯಗಳಿಂದಾಗಿ ಮನೆಯಲ್ಲಿ ಕೆಲವು ಉದ್ವಿಗ್ನತೆಯ ಕ್ಷಣಗಳಿರಬಹುದು. ನಿಮ್ಮ ವಿಚಿತ್ರ ವರ್ತನೆ ನಿಮ್ಮ ಪ್ರೀತಿಪಾತ್ರರ ಜೊತೆಗೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗುತ್ತದೆ. ಕೆಲಸ ಮಾಡುವಾಗ ಸಾಮಾಜಿಕ ತಾಣವನ್ನು ಬಳಸುವುದು ತೊಂದರೆಯುಂಟುಮಾಡಬಹುದು. ತೆರಿಗೆ ಮತ್ತು ವಿಮೆ ವಿಷಯಗಳ ಬಗ್ಗೆ ಗಮನ ನೀಡುವ ಅಗತ್ಯವಿದೆ. ನಿಮ್ಮ ಸಂಗಾತಿಯ ಜೊತೆಗಿನ ದೈನಂದಿನ ಜಗಳಗಳು ಇಂದು ಇನ್ನೂ ಕಠಿಣವಾಗಬಹುದು.

ವೃಷಭ

ನೀವು ಮಕ್ಕಳು ಅಥವಾ ನಿಮಗಿಂತ ಕಡಿಮೆ ಅನುಭವಿಯಾಗಿರುವವರ ಜೊತೆ ತಾಳ್ಮೆಯಿಂದಿರಬೇಕು. ಯಾರಾದರೂ ನಿಮ್ಮ ಹೆಸರು ಕೆಡಿಸಲು ಪ್ರಯತ್ನಿಸಬಹುದದ್ದರಿಂದ ಜಾಗರೂಕರಾಗಿರಿ. ನಿಮ್ಮ ದ್ವೇಷಿಗಳು ಇಂದು ನಿಮಗೆ ಹೆಚ್ಚು ಆಕ್ರಮಣಶೀಲರಾಗಿ ಕಾಣಿಸಬಹುದು ಹಾಗೂ ಇದು ನಿಮಗೆ ಹೆಚ್ಚು ಕಿರಿಕಿರಿ ಮಾಡಬಹುದು. ನಿಮ್ಮ ಸಮಯ ಮತ್ತು ಶಕ್ತಿಯನ್ನು ಇತರರಿಗೆ ಸಹಾಯ ಮಾಡಲು ಸಮರ್ಪಿಸಿ - ಆದರೆ ನಿಮಗೆ ಸಂಬಂಧಿಸಿರದ ವಿಷಯಗಳಲ್ಲಿ ತೊಡಗಿಸಿಕೊಳ್ಳಬೇಡಿ.

ಮಿಥುನ

ಹಠಾತ್ ಅನಿರೀಕ್ಷಿತ ವೆಚ್ಚಗಳು ಆರ್ಥಿಕ ಒತ್ತಡ ತರಬಹುದು. ನಿಮ್ಮ ಅಭಿಪ್ರಾಯಗಳನ್ನು ಇತರರ ಮೇಲೆ ಹೇರಬೇಡಿ- ಘರ್ಷಣೆ ತಪ್ಪಿಸಲು ನೀವು ಇತರರು ಹೇಳುವುದನ್ನೂ ಕೇಳಬೇಕು. ನಿಮ್ಮ ಹಠಾತ್ ಪ್ರವೃತ್ತಿ ನಿಮ್ಮ ಸ್ನೇಹವನ್ನು ಹಾಳು ಮಾಡಬಹುದಾದ್ದರಿಂದ ನಿಮ್ಮ ಸ್ವಭಾವವನ್ನು ನಿಯಂತ್ರಿಸಿ. ಕೆಲಸದ ನಿಧಾನಗತಿ ಸ್ವಲ್ಪ ಒತ್ತಡ ತೆರೆದಿಡುತ್ತದೆ. ಇಂದು ನೀವು ನಿಮ್ಮ ಬುದ್ಧಿಯನ್ನು ಪರೀಕ್ಷಿಸುತ್ತೀರಿ -ನಿಮ್ಮಲ್ಲಿ ಕೆಲವರು ಚದುರಂಗ - ಪದಬಂಧ ಆಡುತ್ತೀರಿ ಹಾಗೂ ಇತರರು ಕಥೆ- ಕವನ ಬರೆಯುತ್ತೀರಿ ಹಾಗೂ ಕೆಲವರಿಗೆ ಇದು ಭವಿಷ್ಯದ ಯೋಜನೆಗಳಿಗೂ ಸಹಾಯವಾಗುತ್ತದೆ.

ಕಟಕ

ಮನೆಯ ವಿಷಯಗಳು ಮತ್ತು ಬಾಕಿಯಿರುವ ಗೃಹಕೃತ್ಯಗಳನ್ನು ಪೂರೈಸಲು ಒಂದು ಅನುಕೂಲಕರ ದಿನ. ನಿಮ್ಮ ಪ್ರೇಮ ಜೀವನ ಇಂದು ಒಂದು ಸುಂದರ ತಿರುವನ್ನು ತೆಗೆದುಕೊಳ್ಳುತ್ತದೆ. ನೀವು ಪ್ರೀತಿಯಲ್ಲಿರುವ ಅದ್ಭುತ ಭಾವನೆ ಹೊಂದುತ್ತೀರಿ. ನೀವು ನಿಮ್ಮ ಫಾರ್ಮ್‌ನಲ್ಲಿದಿದ್ದರಿಂದ ನಿಮ್ಮ ಮೇಲಿನವರು ನಿಮ್ಮ ಜೊತೆ ಇಂದು ತಂಬಾ ಕಠಿಣವಾಗಿ ವರ್ತಿಸುತ್ತಿದ್ದಾರೆಂದು ನೀವು ಅಂದುಕೊಳ್ಳಬಹುದು. ಒಳ್ಳೆಯ ದಿನ ಕಾನೂನು ಸಲಹೆ ಪಡೆಯಲು ವಕೀಲರನ್ನು ಭೇಟಿ ಮಾಡಿ.

ಸಿಂಹ

ಹೊಸ ಸಂಬಂಧಗಳು ದೀರ್ಘಾವಧಿಯದ್ದಾಗಿರುತ್ತವೆ ಮತ್ತು ಹೆಚ್ಚು ಅನುಕೂಲಕರವಾಗಿರುತ್ತವೆ. ಪ್ರಣಯದ ನಡತೆಗಳು ಫಲ ನೀಡುವುದಿಲ್ಲ. ನಿಮ್ಮ ಕೆಲಸದಲ್ಲಿ ನಿಮ್ಮಂತೆಯೇ ಮನೋಭಾವ ಹೊಂದಿರುವ ಸ್ನೇಹಿತರ ಸಹಾಯ ತೆಗೆದುಕೊಳ್ಳಿ. ಅವರ ಸಕಾಲಿಕ ಸಹಾಯ ನಿಮಗೆ ನಿರ್ಣಾಯಕ ಮತ್ತು ಸಹಾಯಕವಾಗಬಲ್ಲದು. ಮೆಡಿಕಲ್ ಟ್ರಾನ್ಸ್ ಕ್ರ್ಪಿಪ್ಷನ್‌ಗೆ ಒಂದು ಬಹಳ ಒಳ್ಳೆಯ ದಿನ.

ಕನ್ಯಾ

ಯಾವುದೇ ಪ್ರಮಾಣ ಮಾಡುವ ಮೊದಲು ತಜ್ಞರನ್ನು ಸಂಪರ್ಕಿಸಿ. ಒಂದು ಕುಟುಂಬದ ಒಟ್ಟಾಗುವಿಕೆಯಲ್ಲಿ ನೀವೇ ಕೇಂದ್ರಬಿಂದುವಾಗಿರುತ್ತೀರಿ. ನೀವು ಹಾಗೂ ನಿಮ್ಮ ಪ್ರೀತಿಪಾತ್ರರು ಒಬ್ಬರೊನ್ನಬ್ಬರು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಮಯ ವ್ಯಯಿಸಬೇಕು. ನೀವು ಕೆಲಸದದಲ್ಲಿ ಒಂದು ವ್ಯವಸ್ಥೆಯ ಅಸಮರ್ಪಕತೆಯನ್ನು ಎದುರಿಸಬಹುದು. ಆದ್ದರಿಂದ ತಜ್ಞರಿಗೆ ಕರೆ ಮಾಡಿ ಹಾಗೂ ಪರಿಣತರನ್ನು ಕರೆಯುವ ಮೊದಲು ಕೆಲವು ಮೂಲಭೂತ ವಿಷಯಗಳನ್ನು ಪರಿಶೀಲಿಸಿ. ಪ್ರಯಾಣಿಸುತ್ತಿದ್ದಲ್ಲಿ ನೀವು ಎಲ್ಲಾ ಪ್ರಮುಖ ದಾಖಲೆಗಳನ್ನು ತೆಗೆದುಕೊಳ್ಳುತ್ತೀರೆಂದು ಖಚಿತಪಡಿಸಿಕೊಳ್ಳಿ.

ತುಲಾ

ನಿಮ್ಮ ನಾಲಗೆ ನಿಮ್ಮ ಅಜ್ಜ ಅಜ್ಜಿಯಂದಿರ ಭಾವನೆಗಳಿಗೆ ಘಾಸಿ ಮಾಡುವುದರಿಂದ ನಿಮ್ಮ ಭಾಷೆಯನ್ನು ನಿಯಂತ್ರಿಸಿ. ಹರಟಿ ನಿಮ್ಮ ಸಮಯ ವ್ಯರ್ಥ ಮಾಡುವುದಕ್ಕಿಂತ ಸುಮ್ಮನಿರುವುದು ಉತ್ತಮ. ನಾವು ಬುದ್ಧಿವಂತ ಚಟುವಟಿಕೆಗಳ ಮೂಲಕ ಜೀವನಕ್ಕೆ ಅರ್ಥ ನೀಡುತ್ತೇವೆಂದು ನೆನಪಿಡಿ. ನೀವು ಅವರ ಕಾಳಜಿ ವಹಿಸುತ್ತೀರೆಂದು ಅವರಿಗೆ ತಿಳಿಯುವಂತೆ ಮಾಡಿ. ನಿಮ್ಮ ಪ್ರೀತಿಪಾತ್ರರನ್ನು ಸಂತೋಷಪಡಿಸುವುದು ಕಷ್ಟವಾಗುತ್ತದೆ. ನಿಮಗೆ ನಿಜವಾಗಿಯೂ ಕೆಲಸದಲ್ಲಿ ನಿಮ್ಮ ಇಂದಿನ ಸವಾಲು ನೀರಸವೆನಿಸಬಹುದು; ಬಹುಶಃ ಆಲಸ್ಯ ಇದಕ್ಕೆ ಕಾರಣವಾಗಿರಬಹುದು.

ವೃಶ್ಚಿಕ

ಇಂದು ಪ್ರೀತಿಯಲ್ಲಿ ನಿಮ್ಮ ವಿವೇಚನಾ ಶಕ್ತಿಯನ್ನು ಬಳಸಿ. ನಿಮ್ಮ ಜ್ಞಾನ ಮತ್ತು ಅನುಭವವನ್ನು ಇತರರೊಂದಿಗೆ ಹಂಚಿಕೊಂಡರೆ ನೀವು ಮನ್ನಣೆ ಗಳಿಸುವಿರಿ. ಇಂದು ಬೇರೆಯವರಿಗೆ ನೀವು ನೀಡಿದ ನೆರವನ್ನು ಒಪ್ಪಿಕೊಂಡಾಗ ನೀವೇ ಕೇಂದ್ರಬಿಂದುವಾಗಿರುತ್ತೀರಿ. ಇಂದು ನೀವು ವೈವಾಹಿಕ ಜೀವನದ ಭಾವಪರವಶತೆಯನ್ನು ಅನುಭವಿಸಲು ಸಾಕಷ್ಟು ಅವಕಾಶಗಳನ್ನು ಹೊಂದುತ್ತೀರಿ.

ಧನು

ಮನೆಯಲ್ಲಿ ನಿಮ್ಮ ಅಸಡ್ಡೆ ವರ್ತನೆಯಿಂದಾಗಿ ನೀವು ಟೀಕೆಗಳನ್ನು ಎದುರಿಸಬೇಕಾಗಬಹುದು. ಇಂದು ನಿಮ್ಮ ಪ್ರಿಯತಮೆಗೆ ತೀರ ಮಧುರವಾದಂಥದ್ದನ್ನು ಹೇಳಬೇಡಿ. ಇಂದು ನೀವು ಕೇಂದ್ರಬಿಂದುವಾಗಿರುತ್ತೀರಿ- ಮತ್ತು ಯಶಸ್ಸು ನಿಮ್ಮ ನಿಲುಕಿನೊಳಗಿದೆ. ನೀವು ಒಂದು ಪರಿಸ್ಥಿತಿಯಿಂದ ಓಡಿಹೋದಲ್ಲಿ - ಇದು ನಿಮ್ಮನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ಅನುಸರಿಸುತ್ತದೆ. ನಿಮ್ಮ ಯೋಜನೆಗಳು ಒಬ್ಬ ಅನಿರೀಕ್ಷಿತ ಅತಿಥಿಯ ಕಾರಣ ಹಾಳಾಗಬಹುದು, ಆದರೆ ಇದು ನಿಮ್ಮ ದಿನವನ್ನು ಉತ್ತಮವಾಗಿಸುತ್ತದೆ.

ಮಕರ

ಹಣಕಾಸಿನಲ್ಲಿ ಸುಧಾರಣೆ ನೀವು ಪ್ರಮುಖ ಖರೀದಿಗಳನ್ನು ಮಾಡುವುದನ್ನು ಅನುಕೂಲಕರವಾಗಿಸುತ್ತದೆ. ಈಗ ತಾನೇ ಪರಿಚಯವಾದವರ ಜೊತೆ ನಿಮ್ಮ ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳಬೇಡಿ. ನಿಮ್ಮ ಕರೆಯನ್ನು ಮುಂದುವರಿಸುವ ಮೂಲಕ ನಿಮ್ಮ ಪ್ರಣಯದ ಸಂಗಾತಿಯನ್ನು ಚುಡಾಯಿಸುತ್ತೀರಿ. ಇಂದು ವಿಶ್ರಾಂತಿ ಪಡೆಯಲು ಸಮಯವಿಲ್ಲ ಬಾಕಿಯಿರುವ ಕೆಲಸಗಳು ನಿಮ್ಮನ್ನು ವ್ಯಸ್ತವಾಗಿಡುತ್ತವೆ. ಕೆಲವರಿಗೆ ಅನಿರೀಕ್ಷಿತ ಪ್ರಯಾಣ ಒತ್ತಡಭರಿತವೂ ಮತ್ತು ಉದ್ವೇಗಭರಿತವೂ ಆಗಿರುತ್ತದೆ. ಹೊರಗಿನವರೊಬ್ಬರು ನೀವು ಮತ್ತು ನಿಮ್ಮ ಸಂಗಾತಿಯ ನಡುವೆ ಅಂತರವುಂಟುಮಾಡಲು ಪ್ರಯತ್ನಿಸಬಹುದಾದರೂ ನೀವಿಬ್ಬರೂ ಅದನ್ನು ನಿಭಾಯಿಸುತ್ತೀರಿ.

ಕುಂಭ

ನೀವು ಪ್ರಣಯದ ಆಲೋಚನೆಗಳು ಮತ್ತು ಹಿಂದಿನ ಕನಸುಗಳಲ್ಲಿ ಕಳೆದುಹೋಗುತ್ತೀರಿ. ಹಗಲುಗನಸು ನಿಮ್ಮ ಪತನಕ್ಕೆ ಕಾರಣವಾಗುತ್ತದೆ - ಇತರರು ನಿಮ್ಮ ಕೆಲಸ ಮಾಡುತ್ತಾರೆಂದು ನಿರೀಕ್ಷಿಸಬೇಡಿ. ನಿಮ್ಮ ಖ್ಯಾತಿಗೆ ಧಕ್ಕೆ ತರುವವರೊಂದಿಗೆ ಸಂಬಂಧ ಹೊಂದಬೇಡಿ. ಇಂದು ನೀವು ವಿವಾಹದ ನಿಜವಾದ ಭಾವಪರವಶತೆಯನ್ನು ತಿಳಿಯುತ್ತೀರಿ.

ಮೀನ

ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ ಕೆಲಸ ಮಾಡುತ್ತಿರುತ್ತವೆ –ನೀವು ಕಾರ್ಯಗಳನ್ನು ತಪ್ಪಿಸಬೇಕು – ಇವು ವ್ಯಾಜ್ಯಗಳಿಗೆ ಕಾರಣವಗಬಹುದು – ನೀವು ಸೇಡು ತೀರಿಸಿಕೊಳ್ಳಬಯಸಿದಲ್ಲಿ ಇದನ್ನು ಘನತವೆತ್ತ ರೀತಿಯಲ್ಲಿ ಮಾಡಬೇಕು . ನಿಮ್ಮ ಪ್ರೀತಿಪಾತ್ರರೊಡನೆ ಪ್ರಯಾಣಕ್ಕೆ ಹೋಗುವ ಮೂಲಕ ನಿಮ್ಮ ಅಮೂಲ್ಯ ಕ್ಷಣಗಳನ್ನು ಪುನಃ ಜೀವಿಸಿ. ಚಿಲ್ಲರೆ ಮತ್ತು ಸಗಟು ವ್ಯಾಪಾರಿಗಳಿಗೆ ಒಳ್ಳೆಯ ದಿನ. ನಿಮ್ಮ ಖ್ಯಾತಿಗೆ ಧಕ್ಕೆ ತರುವವರೊಂದಿಗೆ ಸಂಬಂಧ ಹೊಂದಬೇಡಿ.
Astrology
Cricket Score
Poll Questions