ಸುಭಾಷಿತ :

Saturday, October 19 , 2019 4:33 PM

ಹೆಚ್ಚು ಹೊತ್ತು ಕುಳಿತು ಕೆಲಸ ಮಾಡುತ್ತೀರಾ? ಆಯಸ್ಸು ಕಡಿಮೆ ಆಗತ್ತೆ ನೋಡಿ…


Monday, September 16th, 2019 11:54 am

ಸ್ಪೆಷಲ್ ಡೆಸ್ಕ್ : ಪ್ರತಿಯೊಬ್ಬ ಮನುಷ್ಯನಿಗೆ ಸಾಮಾನ್ಯವಾಗಿರುವ ಅಸೆ ಎಂದರೆ ತಾನು ಹೆಚ್ಚು ಸಮಯ ಬದುಕಬೇಕು. ತನಗೆ ದೀರ್ಘಾಯುಷ್ಯ ಬೇಕು ಎಂದು. ಆದರೆ ದೀರ್ಘಾಯುಷ್ಯ ಪಡೆಯಲು ಏನು ಮಾಡಬೇಕು ಗೊತ್ತಾ? ಮೊದಲಿಗೆ ನಿಮ್ಮ ಅರೋಗ್ಯ ಚೆನ್ನಾಗಿರುವಂತೆ ನೋಡಿಕೊಳ್ಳಬೇಕು. ಜೊತೆಗೆ ನೀವು ತಿನ್ನುವ ಆಹಾರ, ವಾಕಿಂಗ್, ಎಕ್ಸರ್ ಸೈಜ್ … ಇವೆಲ್ಲದರ ಕಡೆಗೆ ಗಮನ ಹರಿಸಬೇಕು.

ಮುಖ್ಯವಾಗಿ ನಡೆಯುವುದರಿಂದ ಆಯಸ್ಸು ವೃದ್ಧಿಯಾಗುತ್ತದೆ. ಹೌದು ಸಂಶೋಧನೆಯೊಂದರಲ್ಲಿ ತಿಳಿದು ಬಂದಂತೆ ಕುಳಿತಲ್ಲೇ ಕುಳಿತು ಕೆಲಸ ಮಾಡುವವರಿಗಿಂತ ಯಾರು ದಿನ ನಿತ್ಯ ೨೦ ನಿಮಿಷ ನಡೆಯುತ್ತಾರೆ ಅವರು ದೀರ್ಘಾಯಸ್ಸು ಹೊಂದುತ್ತಾರೆ ಎಂದು ತಿಳಿದು ಬಂದಿದೆ.

ದೀರ್ಘಾಯುಶಿಗಳಾಗಬೇಕಾದರೆ ಪ್ರತಿನಿತ್ಯ ಕೇವಲ 20 ರಿಂದ 25 ನಿಮಿಷದ ನಡೆಯಿರಿ. ಹೌದು, ಕೇವಲ 25 ನಿಮಿಷ ವಾಕ್ ಮಾಡುವುದರಿಂದ ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ. ಇದರಿಂದ ನಿಮ್ಮ ಆಯಸ್ಸು ವೃದ್ಧಿಸುತ್ತದೆ ಎಂದು ತಿಳಿದುಬಂದಿದೆ.

ದೇಹಕ್ಕೆ ಹೆಚ್ಚು ಕೆಲಸ ಕೊಡದೆ ಕುಳಿತಲ್ಲೇ ಕುಳಿತುಕೊಳ್ಳುವ ಜನರಿಗಿಂತ, ಸದಾ ಒಂದಿಲ್ಲೊಂದು ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಜನರಲ್ಲಿ ಅಕಾಲಿಕವಾಗಿ ಮರಣ ಹೊಂದುವ ಅಪಾಯ ಕಡಿಮೆಯಾಗಿರುತ್ತದೆ ಎಂದು ಜರ್ಮನಿಯ ಸರ್ಲ್ಯಾಂಡ್ ವಿಶ್ವವಿದ್ಯಾನಿಲಯದ ಸಂಶೋಧಕರು ಈ ಕುರಿತಂತೆ ನಡೆಸಿದ ಸಂಶೋಧನೆಯಲ್ಲಿ ತಿಳಿದು ಬಂದಿದೆ.

ಸುಮಾರು 30ರಿಂದ 60 ವರ್ಷ ವಯಸ್ಸಿನ ಜನರನ್ನು ಸಂಶೋಧನೆಗೆ ಒಳಪಡಿಸಲಾಗಿತ್ತು. ಇದರಲ್ಲಿ 20 ರಿಂದ 25 ನಿಮಿಷ ವಾಕ್‌ ಮಾಡುವ ಮನುಷ್ಯರು ಹೆಚ್ಚು ಕಾಲ ಬದುಕುವುದು ತಿಳಿದು ಬಂದಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions