ಸುಭಾಷಿತ :

Saturday, October 19 , 2019 4:33 PM

ಸ್ಪೂನ್ ಬಿಡಿ… ಕೈಗಳಿಂದ ಊಟ ಮಾಡಿ… ಆರೋಗ್ಯ ಸೂಪರ್ ಆಗಿರುತ್ತೆ


Sunday, September 8th, 2019 1:15 pm

ಸ್ಪೆಷಲ್ ಡೆಸ್ಕ್ : ಇಂದಿಂದ ಜನತೆ ಸ್ಟೈಲ್ ಹೆಸರಿನಲ್ಲಿ ಸ್ಪೂನ್ ನಲ್ಲಿ ತಿನ್ನೋರ್ ಹೆಚ್ಚು. ಆದರೆ ನಮಗೆ ಗೊತ್ತಾ? ಕೈಯಲ್ಲಿ ಊಟ ಮಾಡುವುದರಿಂದ ಹೊಟ್ಟೆ ಮಾತ್ರ ತುಂಬೋದಲ್ಲ, ಜೊತೆಗೆ ಮನಸ್ಸು ಮತ್ತು ಆತ್ಮವು ತುಂಬುತ್ತದೆ ಎಂದು ಹೇಳಲಾಗುತ್ತದೆ. ದಕ್ಷಿಣ ಭಾರತದ ಜನ ಸ್ಪೂನ್ ಕ್ಕಿಂತ ಹೆಚ್ಚಾಗಿ ಕೈಗಳಿಂದಲೇ ತಿನ್ನಲು ಇಷ್ಟ ಪಡುತ್ತಾರೆ. ಇದು ಆರೋಗ್ಯಕ್ಕೆ ತುಂಬಾನೇ ಲಾಭದಾಯಕವಾಗಿದೆ.

ಆಯುರ್ವೇದದ ಪ್ರಕಾರ ನಮ್ಮ ಒಂದೊಂದು ಬೆರಳು ಪಂಚಭೂತಗಳನ್ನು ಪ್ರತಿನಿಧಿಸುತ್ತದೆ. ಹೆಬ್ಬೆರಳು ಆಕಾಶವನ್ನು ಪ್ರತಿನಿಧಿಸುತ್ತದೆ. ಮಕ್ಕಳು ಚಿಕ್ಕವರಿರುವಾಗ ಅಂದರೆ ಇನ್ನು ಆಹಾರವನ್ನು ಅಗಿಯಲು ಸಾಧ್ಯವಾಗದೆ ಇದ್ದ ಸಮಯದಲ್ಲಿ ಅವರು ಹಬ್ಬೆರಳನ್ನು ಚೀಪುತ್ತಾರೆ. ಇದು ಜೀರ್ಣಕ್ರಿಯೆಗೆ ಸಹಾಯವಾಗುವಂತಹ ಪ್ರಾಕೃತಿಕ ಕ್ರಮವಾಗಿದೆ. ತೋರ್ಬೆರಳು ಗಾಳಿಯ ಸಂಕೇತ, ಉಂಗುರ ಬೆರಳು ಭೂಮಿ, ಮಧ್ಯ ಬೆರಳು ಬೆಂಕಿ. ಅದೇ ರೀತಿ ಕಿರು ಬೆರಳು ನೀರಿನ ಸಂಕೇತವಾಗಿದೆ.

ನಮ್ಮ ದೇಹದಲ್ಲಿ ಇವುಗಳಲ್ಲಿ ಯಾವುದೇ ಒಂದರ ಕೊರತೆ ಉಂಟಾದರೆ ಹಲವು ಅನಾರೋಗ್ಯಕ್ಕೆ ದೇಹ ತುತ್ತಾಗುತ್ತದೆ. ನಾವು ಬೆರಳುಗಳನ್ನು ಬಳಸಿ ಊಟ ಮಾಡುವಾಗ ಐದು ಬೆರಳುಗಳು ಜೊತೆಯಾಗುತ್ತದೆ. ಅಂದರೆ ಪಂಚಭೂತಗಳು ಆಹಾರದೊಂದಿಗೆ ಸೇರಿ ನಮ್ಮ ದೇಹವನ್ನು ಸೇರುತ್ತದೆ. ಇದರಿಂದ ದೇಹ ಸಮತೋಲನದಲ್ಲರಳು ಸಹಾಯವಾಗುತ್ತದೆ.

ನಿಮಗೆ ಜೀರ್ಣಕ್ರಿಯೆಯ ಸಮಸ್ಯೆ ಇದ್ದರೆ ಕೈಗಳಿಂದ ಊಟ ಮಾಡಿ. ಇದರಿಂದ ನೀವು ಖಂಡಿತವಾಗಿ ಆರೋಗ್ಯದಿಂದ ಇರಲು ಸಹಾಯವಾಗುತ್ತದೆ. ಆಹಾರವನ್ನು ಕೈಗಳಿಂದ ಮುಟ್ಟಿದ ಕೂಡಲೇ ಈಗ ನಾವು ಆಹಾರ ತಿನ್ನುವುದಾಗಿ ಮೆದುಳು ಹೊಟ್ಟೆಗೆ ಸಿಗ್ನಲ್ ತಲುಪಿಸುತ್ತದೆ. ಇದರಿಂದ ಜೀರ್ಣಕ್ರಿಯೆ ಸಹ ಸುಲಭವಾಗಿ ಆಗುತ್ತದೆ. ಆದರೆ ಕೈಗಳಲ್ಲಿ ತಿನ್ನುವ ಮುನ್ನ ಕೈ ಕ್ಲೀನ್ ಆಗಿದೆಯೇ ಎಂಬುದನ್ನು ನೋಡಿಕೊಂಡು ಕೈಗಳನ್ನು ಚೆನ್ನಾಗಿ ತೊಳೆದು ತಿನ್ನಿ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions