ಸುಭಾಷಿತ :

Saturday, October 19 , 2019 4:36 PM

ಮಾಡರ್ನ್ ಉಡುಪು, ಮದ್ಯ ಸೇವನೆ ನಿರಾಕರಿಸಿದ್ದಕೆ ಪತ್ನಿಗೆ ತಲಾಕ್ ನೀಡಿದ ಭೂಪ


Sunday, October 13th, 2019 9:02 am

ಪಾಟ್ನಾ : ಪತ್ನಿ ತುಂಡುಡುಗೆ ಧರಿಸಲು ಒಪ್ಪಿಲ್ಲ ಮತ್ತು ಮದ್ಯ ಸೇವಿಸಲು ನಿರಾಕರಿಸುತ್ತಾಳೆ ಎಂದು ವ್ಯಕ್ತಿವೋರ್ವ ತ್ರಿವಳಿ ತಲಾಖ್​ ನೀಡಿರುವ ವಿಚಿತ್ರ ಪ್ರಕರಣ ಬಿಹಾರದಲ್ಲಿ ನಡೆದಿದೆ.

ಮದುವೆಯಾದ ಬಳಿಕ ಪತಿ ಪತ್ನಿಗೆ ಮಾಡೆರ್ನ್ ಆಗಿರಬೇಕು, ತುಂಡುಡುಗೆ ಧರಿಸಬೇಕು, ಮದ್ಯ ಸೇವಿಸಬೇಕು ಎಂದು ಪದೇ ಪದೇ ಪೀಡಿಸುತ್ತಿದೆ. ಇದನ್ನು ನಿರಾಕರಿಸಿದ್ದಕ್ಕೆ ತಲಾಖ್​ ನೀಡಿದ್ದಾನೆ ಎಂದು ತಿಳಿದು ಬಂದಿದೆ.

2015ರಲ್ಲಿ ಇಮ್ರಾನ್ ಮುಸ್ತಫಾ ಅವರನ್ನು ಮದುವೆಯಾಗಿ ದೆಹಲಿಗೆ ತೆರಳಿದ್ದೆವು. ಕೆಲವು ತಿಂಗಳುಗಳ ಆಧುನಿಕ ಹುಡುಗಿಯರಂತೆ ಇರಬೇಕು, ಸಣ್ಣ ಉಡುಪು ಧರಿಸಿ ರಾತ್ರಿ ಪಾರ್ಟಿಗಳಿಗೆ ಹೋಗಿ ಮದ್ಯ ಸೇವಿಸಬೇಕೆಂದು ಆತ ಬಯಸುತ್ತಿದ್ದ. ಇವುಗಳನ್ನು ಮಾಡಲು ನಿರಾಕರಿಸಿದಾಗ ಪ್ರತಿದಿನ ಹೊಡೆಯುತ್ತಿದ್ದ ಎಂದು ಸಂತ್ರಸ್ತ ಮಹಿಳೆ ದೂರಿದ್ದಾರೆ.

ಅಲ್ಲದೆ ಕೆಲ ದಿನಗಳ ಹಿಂದೆ ಮನೆಯಿಂದ ಹೊರಹೋಗುವಂತೆ ಸಂತ್ರಸ್ಥೆಯನ್ನು ಥಳಿಸಿದ್ದ. ಹೊರಹೋಗಲು ನಿರಾಕರಿಸಿದಾಗ ತ್ರಿವಳಿ ತಲಾಖ್ ಕೊಟ್ಟಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.ಸಂತ್ರಸ್ತೆಯು ಸದ್ಯ ರಾಜ್ಯ ಮಹಿಳಾ ಆಯೋಗದ ಕದ ತಟ್ಟಿದ್ದಾರೆ. ಆಯೋಗವು ತಲಾಖ್​ ನೀಡಿದ ಇಮ್ರಾನ್​ ಮುಸ್ತಫಾಗೆ ನೋಟಿಸ್​​ ಕಳುಹಿಸಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions