ಸುಭಾಷಿತ :

Saturday, October 19 , 2019 4:36 PM

ಮಕ್ಕಳ ಆರೋಗ್ಯಕ್ಕೆ ರಾಮಬಾಣ ದಾಳಿಂಬೆ…


Saturday, September 14th, 2019 12:28 pm

ಸ್ಪೆಷಲ್ ಡೆಸ್ಕ್ : ದಾಳಿಂಬೆ ಹಣ್ಣು, ಎಲೆ, ಹೂವು.. ಹೀಗೆ ದಾಳಿಂಬೆಯ ಎಲ್ಲಾ ಭಾಗಗಳಿಂದ ಹಲವು ಪ್ರಯೋಜನಗಳಿವೆ. ಅದರಲ್ಲೂ ಮಕ್ಕಳಿಗೆ ಆರೋಗ್ಯದಲ್ಲಿ ಏನಾದರೂ ಸಮಸ್ಯೆ ಕಂಡು ಬಂದರೆ ದಾಳಿಂಬೆಯನ್ನು ನೀಡಿದರೆ ಸಮಸ್ಯೆಗಳು ನಿವಾರಣೆಯಾಗೋದರಲ್ಲಿ ಎರಡು ಮಾತಿಲ್ಲ.

ದಾಳಿಂಬೆಯನ್ನು ಯಾವ ರೀತಿಯಲ್ಲಿ ಬಳಕೆ ಮಾಡಿದರೆ ಮಕ್ಕಳಿಗೆ ಯಾವ ರೀತಿಯಲ್ಲಿ ಉಪಯೋಗವಾಗುತ್ತೆ ನೋಡಿ…

ಜೀರ್ಣಕ್ರಿಯೆ : ಮಕ್ಕಳಲ್ಲಿ ಜೀರ್ಣಕ್ರಿಯೆಯ ಸಮಸ್ಯೆ ಕಂಡು ಬಂದರೆ ದಾಳಿಂಬೆ ನೀಡಿ . ಇದು ಬ್ಯಾಕ್ಟೀರಿಯಾ ಮತ್ತು ವೈರಲ್‌ ಕಾರಣದಿಂದ ಉಂಟಾಗುವ ಭೇದಿಯನ್ನು ನಿವಾರಣೆ ಮಾಡುತ್ತದೆ.

ಕರುಳಿನ ಸಮಸ್ಯೆಗೆ : ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ಕರುಳಿನ ಹುಳುಗಳನ್ನು ನಿವಾರಿಸುತ್ತದೆ.

ಹಲ್ಲಿನ ಸಮಸ್ಯೆ ನಿವಾರಣೆ : ಮಕ್ಕಳಲ್ಲಿ ಆಗಾಗ್ಗೆ ಕಂಡುಬರುವ ಹಲ್ಲಿನ ಸಮಸ್ಯೆಗಳನ್ನು ನಿವಾರಿಸುವಲ್ಲಿ ದಾಳಿಂಬೆ ಸಹಾಯಕವಾಗಿದೆ.

ಜ್ವರ ಕಡಿಮೆಯಾಗುತ್ತದೆ : ದಾಳಿಂಬೆ ರಸವನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಸೇವಿಸುವುದರಿಂದ ಜ್ವರ ನಿಯಂತ್ರಣಕ್ಕೆ ಬರುತ್ತದೆ ಹಾಗೂ ಮಕ್ಕಳಿಗೆ ಅತ್ಯಗತ್ಯವಾಗಿರುವ ಪೋಷಕಾಂಶಗಳನ್ನು ಒದಗಿಸುವಲ್ಲಿ ಸಹಾಯಕವಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions