ಸುಭಾಷಿತ :

Monday, September 23 , 2019 3:56 PM

ಬಿಗ್ ನ್ಯೂಸ್ : ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿ ಶಾಸಕ ಡಾ.ಕೆ.ಸುಧಾಕರ್ ನೇಮಕ : ರಾಜ್ಯ ಸರ್ಕಾರದ ಆದೇಶ


Thursday, June 20th, 2019 5:41 pm


ಬೆಂಗಳೂರು : ಅತೃಪ್ತ ಶಾಸಕರನ್ನು ತೃಪ್ತಿಪಡಿಸುವ ದಾರಿಯನ್ನು ಹಿಡಿದಿರುವ ರಾಜ್ಯ ಮೈತ್ರಿ ಸರ್ಕಾರ, ಇದೀಗ ಮೈತ್ರಿ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದ ಶಾಸಕರನ್ನು ತೃಪ್ತಿಪಡಿಸಿದೆ. ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರ ಒತ್ತಡಕ್ಕೆ ಮಣಿದು, ಇದೀಗ ಶಾಸಕ ಡಾ.ಸುಧಾಕರ್ ಅವರನ್ನು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿ ನೇಮಕ ಮಾಡಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಅತೃಪ್ತ ಕಾಂಗ್ರೆಸ್ ಶಾಸಕರ ಬಂಡಾಯ ಮುಂದುವರೆದಿದೆ. ಇದನ್ನು ನಿಯಂತ್ರಣಕ್ಕೆ ತರಲು ಮೈತ್ರಿ ಸರ್ಕಾರ ಮುಂದಾಗಿದೆ. ಸಂಪುಟ ವಿಸ್ತರಣೆ ಬಳಿಕ ಉಂಟಾಗಿದ್ದ ಭಿನ್ನಮತ ನಿಯಂತ್ರಣಕ್ಕೆ ನಿಗಮ ಮಂಡಳಿಗೆ ಅತೃಪ್ತ ಶಾಸಕರನ್ನು ನೇಮಕ ಮಾಡುವ ಪ್ರಕ್ರಿಯೆಯನ್ನು ಶುರು ಮಾಡಿದೆ.

ಹೀಗಾಗಲೇ ಇದೇ ರೀತಿಯ ಕ್ರಮವನ್ನು ಹಲವು ಬಾರಿ ಅನುಸರಿಸಿದ್ದ ಮೈತ್ರಿ ಸರ್ಕಾರದ ನಾಯಕರು, ಇದೀಗ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರ ಒತ್ತಡಕ್ಕೆ ಮಣಿದು, ಕಾಂಗ್ರೆಸ್ ಶಾಸಕ ಡಾ.ಕೆ.ಸುಧಾಕರ್ ಅವರನ್ನುರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿ ನೇಮಕ ಮಾಡಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions