ಮೇಷ

ಅಧಿಕಾರಿ ವರ್ಗದವರಲ್ಲಿ ಕಲಹ ತಂದೀತು. ಗೃಹ ನಿರ್ಮಾಣ ಭೂ ಖರೀದಿಗೆ ಸಾಧ್ಯತೆ ಇರುತ್ತದೆ. ಶುಭಮಂಗಲ ಕಾರ್ಯಗಳ ಕರೆಯೋಲೆ ಸಂತಸ ತರಲಿದೆ. ವಾಹನ ಚಾಲನೆಯಲ್ಲಿ ಜಾಗ್ರತೆ.

ವೃಷಭ

ಆಗಾಗ ಹಣದ ಆವಶ್ಯಕತೆ ಇರುತ್ತದೆ. ದೇಹಾರೋಗ್ಯ ಚೇತರಿಕೆ ತಂದರೂ ಕಾಳಜಿ ಇರಲಿ. ನೂತನ ಕೆಲಸಕಾರ್ಯಗಳನ್ನು ಪ್ರಾರಂಭಿಸಬಹುದಾಗಿದೆ. ಕೋರ್ಟು ಕಚೇರಿ ಕಾರ್ಯಗಳಿಗಾಗಿ ಅಲೆದಾಟವಿದೆ.

ಮಿಥುನ

ಆರ್ಥಿಧಿಕವಾಗಿ ನಿರಂತರ ಖರ್ಚುವೆಚ್ಚಗಳಿರುತ್ತವೆ. ತ್ವರಿತ ನಿರ್ಧಾರಧಿದಿಂದ ಕಾರ್ಯಸಾಧನೆಯಾದೀತು. ನಿಮ್ಮ ಕಾರ್ಯಕ್ಷೇತ್ರದಲ್ಲಿ ರಹಸ್ಯವನ್ನು ಕಾಯ್ದುಕೊಳ್ಳಬೇಕು. ಹಿತಶತ್ರುಗಳ ಕಿರಿಕಿರಿ ತಪ್ಪದು.

ಕಟಕ

ದೃಢ ನಿರ್ಧಾರದಿಂದ ಮುಂದುವರಿಯಿರಿ. ವೃತ್ತಿರಂಗದಲ್ಲಿ ಕಾರ್ಯಕ್ಷೇತ್ರದಲ್ಲಿ ಸಮಯ ಸಾಧಕರ ಬಗ್ಗೆ ಹೆಚ್ಚಿನ ಜಾಗ್ರತೆ ಇರಲಿ. ಖರ್ಚುವೆಚ್ಚಗಳನ್ನು ಮಿತವಾಗಿ ಬಳಸಿರಿ. ಶ್ರೀದೇವರ ಅನುಗ್ರಹಕ್ಕೆ ಪ್ರಾರ್ಥಿಸಿರಿ.

ಸಿಂಹ

"ಅಹಂ' ಭಾವವನ್ನು ತೊರೆದು ಮುಂದುವರಿಯಬೇಕು. ಸಾಂಸಾರಿಕ ಸುಖ ಉತ್ತಮವಿದ್ದರೂ ಅನಾವಶ್ಯಕ ಕಿರಿಕಿರಿ ಇರುತ್ತದೆ. ವೃತ್ತಿರಂಗದಲ್ಲಿ ಹಿರಿಯ ಅಧಿಕಾರಿಗಳೊಡನೆ ಸಂಘರ್ಷಕ್ಕೆ ಇಳಿಯದಿರಿ.

ಕನ್ಯಾ

ವಿದ್ಯಾರ್ಥಿಗಳು ಇನ್ನೂ ಹೆ‌ಚ್ಚಿನ ರೀತಿಯಲ್ಲಿ ಅಭ್ಯಾಸಬಲವನ್ನು ಹೆ‌ಚ್ಚಿಸ ಬೇಕಾಗುತ್ತದೆ. ಪರೋಪಕಾರ ಉತ್ತಮವಿದ್ದರೂ ವಂಚನೆಗೆ ಗುರಿಯಾಗಲಿದ್ದೀರಿ. ಮಾತಿನಲ್ಲಿ ವೈರತ್ವ ಬರಬಹುದು ಜಾಗ್ರತೆ ಇರಲಿ.

ತುಲಾ

ವ್ಯಾಪಾರ ವ್ಯವಹಾರಗಳ ಪಾಲುದಾರಿಕೆಯ ವಿಚಾರದಲ್ಲಿ ಜಾಗ್ರತೆ ಅಗತ್ಯವಿದೆ. ಸ್ವಯಂ ನಿರ್ಣಯ ನಿಮಗೆ ಅನುಕೂಲಕರ. ನಿರುದ್ಯೋಗಿಗಳಿಗೆ ಸದ್ಯದಲ್ಲೇ ಉದ್ಯೋಗ ಭಾಗ್ಯ ನಿಶ್ಚಿತವಾಗಿ ಸಿಗಲಿದೆ.

ವೃಶ್ಚಿಕ

ಆಗಾಗ ಸಂಚಾರ ದೇಹಾರೋಗ್ಯ ಮಾತ್ರವಲ್ಲಾ ಧನಾಗಮನಕ್ಕೆ ಸಮಸ್ಯೆ ತರಬಹುದು. ಸಾಂಸಾರಿಕವಾಗಿ ಶುಭಮಂಗಲ ಕಾರ್ಯಗಳಿಗಾಗಿ ಸಂಭ್ರಮಿಸುವಿರಿ. ವಿದ್ಯಾರ್ಥಿಗಳಿಗೆ ಶುಭವಾರ್ತೆ ಸಂತಸ ತರಲಿದೆ.

ಧನು

ವೈವಾಹಿಕ ಭಾಗ್ಯಕ್ಕೆ ಸಂಬಂಧಗಳು ಕೂಡಿ ಬರಲಿವೆ. ಸದುಪಯೋಗಿಸಿರಿ. ಆರ್ಥಿಕವಾಗಿ ಹೆಚ್ಚಿನ ಜಾಗ್ರತೆ ವಹಿಸಿರಿ. ದೂರ ಸಂಚಾರ ಹಾಗೂ ಚಾಲನೆಯಲ್ಲಿ ಜಾಗ್ರತೆ ಇರಲಿ. ಶ್ರೀದೇವರ ಅನುಗ್ರಹಕ್ಕೆ ಪ್ರಾರ್ಥಿಸಿರಿ.

ಮಕರ

ಕಾರ್ಯರಂಗದಲ್ಲಿ ವಿಸ್ತರಣೆ ಅನಿವಾರ್ಯವಾದೀತು. ವಿವಿಧ ಮೂಲಧಿಗಳಿಂದ ಧನಾಗಮನದಿಂದ ಮುನ್ನಡೆಗೆ ಸಾಧಕವಾದೀತು. ಮುಖ್ಯವಾಗಿ ಎಲ್ಲರೂ ದೇಹಾರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ದಿನಾಂತ್ಯ ಶುಭವಾರ್ತೆ.

ಕುಂಭ

ರಾಶಿಸ್ಥಿತ ಕುಜ ಅನಾರೋಗ್ಯಕ್ಕೆ ಕಾರಣನಾದಾನು. ವಿದ್ಯಾರ್ಥಿಗಳಿಗೆ ಆಗಾಗ ನೆನಪಿನ ಶಕ್ತಿ ಕುಗ್ಗಲಿದೆ. ಮಹಿಳೆಯರು ಅನಾವಶ್ಯಕವಾಗಿ ಉದ್ವೇಗಕ್ಕೆ ಒಳಗಾದಾರು. ನಿರುದ್ಯೋಗಿಗಳಿಗೆ ನಿರಾಶೆ ತೋರಿ ಬರಲಿದೆ

ಮೀನ

ಅವಿವಾಹಿತರು ಕಂಕಣಬಲವನ್ನು ಹೊಂದಲಿದ್ದಾರೆ. ಶ್ರೀದೇವರ ದರ್ಶನ‌ ಭಾಗ್ಯಕ್ಕಾಗಿ ದೂರ ಸಂಚಾರ ಹಾಗೂ ಖರ್ಚು ತರಲಿದೆ. ನಿರೀಕ್ಷಿತ ಕಾರ್ಯಸಾಧನೆಗೆ ದೃಢ ನಿರ್ಧಾರಗಳಿಂದ ಮುಂದುವರಿಯಬೇಕು.
Astrology
Cricket Score
Poll Questions