ಸುಭಾಷಿತ :

Saturday, October 19 , 2019 4:37 PM

ತನಗಿರುವ ಖಾಯಿಲೆ ಬಗ್ಗೆ ಗುಟ್ಟು ಬಿಚ್ಚಿಟ್ಟ ‘ಬೆಡಗಿ’ ಇಲಿಯಾನಾ..!


Monday, September 16th, 2019 7:07 pm

ಸಿನಿಮಾ ಡೆಸ್ಕ್ : ಬಾಲಿವುಡ್ ಹಾಟ್ ಬೆಡಗಿ ಇಲಿಯಾನಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಬ್ಯುಸಿಯಾಗಿರುತ್ತಾರೆ.

ಯಾವಾಗಲೂ ತಮ್ಮ ಹಾಟ್ ಫೋಟೋವನ್ನು  ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಸಖತ್ ಸುದ್ದಿ ಮಾಡುವ ನಟಿ ಇಲಿಯಾನಾ ನಮಗಿರುವ ಖಾಯಿಲೆ ಬಗ್ಗೆ ರಿವೀಲ್ ಮಾಡಿದ್ದಾರೆ.

ಹೌದು, ಇಲಿಯಾನಾ ಅವರು ತಮ್ಮ ಟ್ವಿಟ್ಟರಿನಲ್ಲಿ ತನಗಿರುವ ಕಾಯಿಲೆ ಬಗ್ಗೆ ರಿವೀಲ್ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ನನಗೆ ನಿದ್ದೆಯಲ್ಲಿ ನಡೆದಾಡುವ ಕಾಯಿಲೆ ಇದೆ ಎಂದು ನಾನು ಒಪ್ಪಿಕೊಂಡಿದ್ದೇನೆ.

ಬೆಳಗ್ಗೆ ಎದ್ದಾಗ ನನ್ನ ಕಾಲಿನಲ್ಲಿ ಊತ ಕಾಣಿಸಿಕೊಳ್ಳುವುದರ ಜೊತೆಗೆ ಕಾಲಿಗೆ ಗಾಯಗಳಾಗಿರುತ್ತವೆ. ಇದನ್ನು ಹೇಗೆ ಎಂದು ಹೇಳಲು ನನಗೆ ಬೇರೆ ದಾರಿಯಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.

ಸದ್ಯ ಇಲಿಯಾನಾ `ಪಾಗಲ್‍ಪಂತಿ’ ಚಿತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರದಲ್ಲಿ ನಟ ಜಾನ್ ಅಬ್ರಾಹಂ, ಅನಿಲ್ ಕಪೂರ್, ಅರ್ಷದ್ ವಾರ್ಸಿ ಹಾಗೂ ನಟಿ ಕೃತಿ ಕರಬಂಧ ಅಭಿನಯಿಸುತ್ತಿದ್ದಾರೆ. ನವೆಂಬರ್ 22ರಂದು ಸಿನಿಮಾ ತೆರೆ ಕಾಣುತ್ತಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions