ಸುಭಾಷಿತ :

Saturday, October 19 , 2019 4:33 PM

ಆಂಧ್ರದ ಸ್ಪೆಷಲ್ ಪೆಸರಟ್ಟು


Thursday, September 12th, 2019 11:24 am

ಸ್ಪೆಷಲ್ ಡೆಸ್ಕ್ : ಆಂಧ್ರ ಪ್ರದೇಶದಲ್ಲಿ ಮಾಡುವ ಹಲವಾರು ತಿನಿಸುಗಳಲ್ಲಿ ಪೆಸರಟ್ಟು ಕೂಡ ಒಂದು. ಇದೊಂದು ದೋಸೆಯ ವಿಧವಾಗಿದ್ದು, ತುಂಬಾನೇ ಟೇಸ್ಟಿಯಾಗಿರುತ್ತದೆ. ಯಾವಾಗಲೂ ಒಂದೇ ರೀತಿಯ ದೋಸೆ ಮಾಡಿ ತಿಂದು ಬೇಜಾರಾಗಿದ್ದರೆ ಪೆಸರಟ್ಟು ಟ್ರೈ ಮಾಡಿ..

ಬೇಕಾಗುವ ಸಾಮಗ್ರಿಗಳು : ಹೆಸರು ಕಾಳು- 2 ಕಪ್, ಅಕ್ಕಿ- ೧/೨ ಕಪ್, ಈರುಳ್ಳಿ- ಸಣ್ಣಗೆ ಹೆಚ್ಚಿದ ೧ , ಶುಂಠಿ- 1 ತುಂಡು, ಜೀರಿಗೆ- 1 1/2 ಟೀಚಮಚ, ಹಸಿಮೆಣಸಿನ ಕಾಯಿ- 5, ಉಪ್ಪು- ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ :
ಮೊದಲಿಗೆ ಹೆಸರುಕಾಳು ಮತ್ತು ಅಕ್ಕಿಯನ್ನು 6 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.
ನಂತರ ಅದಕ್ಕೆ ಈರುಳ್ಳಿ, ಹಸಿರು ಮೆಣಸಿನಕಾಯಿ, ಶುಂಠಿ ಮತ್ತು ಉಪ್ಪನ್ನು ಬೆರೆಸಿಚೆನ್ನಾಗಿ ರುಬ್ಬಿಕೊಳ್ಳಿ.
ಇದಕ್ಕೆ ಜೀರಿಗೆ ಕಾಳು ಸೇರಿಸಿ ಕಲಸಿ.
ಈಗ ದೋಸೆ ಕಾವಲಿಯನ್ನು ಕಾಯಿಸಿ ಬಿಸಿಯಾದ ಮೇಲೆ ದೋಸೆ ಹಿಟ್ಟನ್ನು ಸಮವಾಗಿ ಹೆಂಚಿನ ಮೇಲೆ ಹಾಕಿ ಎಣ್ಣೆ ಹಾಕಿ.
ದೋಸೆ ಸ್ವಲ್ಪ ಬೆಂದ ನಂತರ ಕತ್ತರಿಸಿದ ಈರುಳ್ಳಿ, ಬೇಕಿದ್ದಲ್ಲಿ ಕೊತ್ತಂಬರಿ ಸೊಪ್ಪು ಅದರ ಮೇಲೆ ಉದುರಿಸಿ.
ದೋಸೆಯನ್ನು ಎರಡು ಕಡೆ ಚೆನ್ನಾಗಿ ಬೇಯಿಸಿ.
ಈಗ ರುಚಿಯಾದ ಪೆಸರಟ್ಟು ಸವಿಯಲು ರೆಡಿ. ಇದನ್ನು ತೆಂಗಿನಕಾಯಿ ಚಟ್ನಿ ಜೊತೆ ತಿನ್ನಲು ಚೆನ್ನಾಗಿರುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Gadgets
State
Astrology
Cricket Score
Poll Questions