ಸುಭಾಷಿತ :

Tuesday, September 17 , 2019 7:01 AM

-->

‘ಅಭಿಮಾನಿಯ ಹುಚ್ಚಾಟ’ : ‘ಡಾರ್ಲಿಂಗ್’ ಪ್ರಭಾಸ್ ಗಾಗಿ ಈತ ಮಾಡಿದ್ದೇನು…?


Thursday, September 12th, 2019 6:04 pm

ಸಿನಿಮಾ ಡೆಸ್ಕ್ : ಬಾಹುಬಲಿ-2 ಚಿತ್ರದ ನಂತರ ಪ್ರಭಾಸ್ ನಟಿಸಿರುವ ಬಹುನಿರೀಕ್ಷಿತ `ಸಾಹೋಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಾ ಮುನ್ನುಗ್ಗುತ್ತಿದೆ.

ಈ ನಡುವೆ ಪ್ರಭಾಸ್‍ಗಾಗಿ ಅಭಿಮಾನಿಯೊಬ್ಬ ಮೊಬೈಲ್ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತೆಲಂಗಾಣದ ಜಂಗಮ್‍ನಲ್ಲಿ ನಡೆದಿದೆ.

ಪ್ರಭಾಸ್ ಅವರನ್ನು ಭೇಟಿ ಮಾಡಲು ಅವಕಾಶ ನೀಡಬೇಕು, ಇಲ್ಲವಾದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅಭಿಮಾನಿ ಬೆದರಿಕೆ ಹಾಕಿದ್ದನು. ಅಲ್ಲದೆ ಸ್ಥಳಕ್ಕೆ ಪ್ರಭಾಸ್ ಬರಬೇಕು ಎಂದು ಅಭಿಮಾನಿ ಹಠ ಹಿಡಿದಿದ್ದನು. ಆತ್ಮಹತ್ಯೆಗೆ ಯತ್ನಿಸಿದ ಯುವಕನ ಗುರುತು ಪತ್ತೆಯಾಗಿಲ್ಲ, ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಅಭಿಮಾನಿಯ ಮನವರಿಕೆ ಮಾಡಿ ಟವರ್ ನಿಂದ ಕೆಳಗಿಳಿಸಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions